ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಿಡಿಗೇಡಿಗಳು ಮನಸೋ ಇಚ್ಛೆ ಕಲ್ಲು ಬೀಸಿದ್ದು, ಚಾಲಕ ಮೃತಪಟ್ಟಿದ್ದಾರೆ. ಜಮಖಂಡಿಯಲ್ಲಿ ಘಟನೆ ಸಂಭವಿಸಿದೆ. ಜಮಖಂಡಿ ಸಾರಿಗೆ ಘಟಕದ ಬಸ್ ಚಾಲಕ ಎನ್.ಕೆ. ಅವಟಿ (55) ಮೃತ ದುರ್ದೈವಿ. ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಿದ್ದ ಕಾರಣ ಮೇಲಧಿಕಾರಿಗಳ ಸೂಚನೆಯಂತೆ ಎನ್.ಕೆ. ಅವಟಿ ಕೆಲಸಕ್ಕೆ ಹಾಜರಾಗಿದ್ದರು. ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಎನ್.ಕೆ. ಅವಟಿ ಬರುತ್ತಿದ್ದರು. ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್ […]