ತುಮಕೂರು: ಜೆಡಿಎಸ್ ನಾಯಕರು ಮುಖ್ಯಮಂತ್ರಿಗಳಾಗುವುದಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ೧೨೦ ಸೀಟು ಗೆದ್ದು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ, ನಮ್ಮ ನಾಯಕರು ಸಿಎಂ ಆಗುವುದಿಲ್ಲ ಎಂದರು. ಕಾಂಗ್ರೆಸ್‌ನವರು ಪ್ರಚಾರಕ್ಕೆ ಸಿಎಂ ಆಗುವ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಹುಮತ ಗಳಿಸಲಿ ಆಮೇಲೆ ಸಿಎಂ ಬಗ್ಗೆ ಮಾತನಾಡಲಿ ಅದನ್ನು ಬಿಟ್ಟು ಬಿಟ್ಟಿ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಕಿತ್ತಾಡುತ್ತಿದ್ದಾರೆ ಎಂದರು. ಪ್ರಧಾನಿ ಮೋದಿ ದರೋಡೆಕೋರರಿದ್ದಂತೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಂಧನ ಉತ್ಪನ್ನಗಳ ಬೆಲೆ ಗಗನಕ್ಕೇರಿದರೂ ಪ್ರಧಾನಿ ಮೌನವಹಿಸಿದ್ದಾರೆ ಎಂದು ಟೀಕಿಸಿದರು. ಕರೋನಾ ಪರಿಸ್ಥಿತಿ ನಿರ್ವಹಿಸುವಲ್ಲಿ ಬಿಎಸ್‌ವೈ ನೇತೃತ್ವದ ಸರಕಾರ ವಿಫಲವಾಗಿದೆ. ಕಮಲದಲ್ಲಿ ಹಲವು ಗುಂಪುಗಳಾಗಿ ಸಿಎಂ ಕೆಳಗಿಳಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಕುಟುಕಿದರು.
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ರಾಜಕೀಯದಲ್ಲಿ ಒಂದು ಮಾತಿದೆ. ‘ಇಲ್ಲಿ ಯಾರೂ ಶತ್ರುವೂ ಅಲ್ಲ. ಯಾರು ಮಿತ್ರರೂ ಅಲ್ಲ’ ಎಂದು. ಇದು ಕಾಲಕಾಲಕ್ಕೆ ಸಾಬೀತಾಗಿದೆ ಕೂಡ. ಕೆಲ ದಿನಗಳ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ‘ಜೆಡಿಎಸ್ ತಿಪ್ಪರಲಾಗ ಹಾಕಿದರೂ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ. ಅದೇನಿದ್ದರೂ ಇನ್ನೊಬ್ಬರ ಕುದುರೆ ಮೇಲೆ ಕೂತು, ಅಧಿಕಾರ ನಡೆಸುವುದಕ್ಕಷ್ಟೇ ಲಾಯಕ್’. ಹೀಗೆಂದು...