ಕಥೆ ಹೇಳುವುದೆಂದರೆ ಮನಸ್ಸಿಗೆ ಇನ್ನಿಲ್ಲದ ಪ್ರೀತಿ. ನಿಜಾರ್ಥದಲ್ಲಿ ಕಥೆ ಹೇಳುವುದನ್ನು ಮನಸ್ಸು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿದಿನ, ಪ್ರತಿಗಳಿಗೆಯೂ ಅದು ಕಥೆಯನ್ನು ನೇಯುತ್ತಲೆ ಇರುತ್ತದೆ. ನಾವು ಯಾರು? ಹೇಗಿದ್ದೇವೆ? ಬದುಕಲ್ಲಿ ನಾವೇನು ಮಾಡಬೇಕು? ಬೇರೆಯವರು ನಮ್ಮ ಬಗ್ಗೆ ಏನು ತಿಳಿದಾರೋ? ಜಗತ್ತಿನ ಸಮಸ್ಯೆ ಏನು? ಭವಿಷ್ಯದಲ್ಲಿ ಏನಾಗುವುದು? ನಮ್ಮ ಹಿಂದಿನ ಬದುಕಲ್ಲಿ ಆದ ತಪ್ಪೇನು? ಹೀಗೆ ಆಕಾಶವಾಣಿ ರೇಡಿಯೋ ತರಹ ನಿಲ್ಲಿಸದೆ ಒಂದೇ ಸಮನೆ ಬಿತ್ತರಿಸುತ್ತದೆ ಕಥೆಗಳನ್ನು ಮನಸ್ಸು. ಸಮಸ್ಯೆ ಎಂದರೆ ಮನಸ್ಸು ಹೇಳುವ ಕಥೆಗಳಲ್ಲಿ ಹೆಚ್ಚಿನವು ಋಣಾತ್ಮಕವಾಗಿರುತ್ತವೆ. […]