ತಿರುವನಂತಪುರ: ‘ನವ ಕೇರಳ ಸದಾಸ್’ ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿ ದ್ದಾರೆ ಎನ್ನಲಾದ ಹಲ್ಲೆ ವಿರೋಧಿಸಿ ಪಕ್ಷವು ಶನಿವಾರ ನಡೆಸಿದ ಡಿಜಿಪಿ ಕಚೇರಿಯತ್ತ ನಡಿಗೆ ವಿಕೋಪಕ್ಕೆ ತಿರುಗಿದೆ. ರ‍್ಯಾಲಿ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ಹಾಗೂ ದೊಣ್ಣೆಗಳನ್ನು ಪೊಲೀಸರತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಅಸ್ತ್ರ ಬಳಸಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ಹಿರಿಯ ಮುಖಂಡ ಕೆ.ಸುಧಾಕರನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹಾಗೂ ಹಿರಿಯ […]