ಕೇರಳ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ರಾಜ್ಯ ಸಚಿವ ಟಿ.ಎಚ್.ಮುಸ್ತಫಾ (82 )ಅವರು ವಯೋಸಹಜ ಕಾಯಿಲೆಗಳಿಂದ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ ಮತ್ತು ಎಂಟು ಮಕ್ಕಳನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಸ್ತಫಾ ಅವರು ಕೇರಳದ ಕರುಣಾಕರನ್ ಸಂಪುಟದಲ್ಲಿ ಮಾಜಿ ಆಹಾರ ಸಚಿವ ಮತ್ತು ಐದು ಬಾರಿ ಶಾಸಕರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಿಗ್ಗೆ 5.43 ಕ್ಕೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮುಸ್ತಫಾ ಅವರ […]