ಕೇಪ್‌ಟೌನ್: ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಬೌಲರ್ ಕೇಶವ್ ಮಹಾರಾಜ್ ಹೇಳಿದ್ದಾರೆ. ವಿಶ್ವಕಪ್‌ನ 9ನೇ ಆವೃತ್ತಿಯು ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರ ವರೆಗೆ ನಡೆಯಲಿದೆ. ಟೂರ್ನಿ ಕುರಿತು ಮಾತನಾಡಿರುವ ಮಹಾರಾಜ್, ಮುಂಬರುವ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಉತ್ತಮ ಪಿಚ್ ಮತ್ತು ಚಿಕ್ಕ ಬೌಂಡರಿಯುಳ್ಳ ಕ್ರೀಡಾಂಗಣಗಳಲ್ಲಿ ನಿಯಂತ್ರಣ ಸಾಧಿಸಲು ಪ್ರತಿ ತಂಡಕ್ಕೂ ಸ್ಪಿನ್ನರ್‌ಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಟಿ20 […]