Kidnapping case:ನಿವೃತ ಪ್ರಾಂಶುಪಾಲರಾದ ಕುಂಕುಮ್ ಜೈನ್ ಮತ್ತು ರಮಾ ರಾಣಿ ಅವರನ್ನು ದುಷ್ಕರ್ಮಿಗಳು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣಕ್ಕೆ ಯತ್ನಿಸಿದ್ದಾರೆ. ಇವರಿಬ್ಬರನ್ನು ಮೊಹಮ್ಮದ್ ಆದಿಲ್ ಶೇಖ್ ಎಂಬಾತ ಕಿಡ್ನ್ಯಾಪ್ ಮಾಡಿ ಬೆದರಿಸಿದ್ದಾನೆ ಎನ್ನಲಾಗಿದೆ. ಈ ಇಬ್ಬರು ಸಹೋದರಿಯರಿಗೆ ಸೇರಿದ ಆಸ್ತಿಯನ್ನು ತಮ್ಮ ಆಸ್ತಿಯೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಶಕ್ಕೆ ಪಡೆಯಲು ಮೊಹಮ್ಮದ್ ಆದಿಲ್ ಶೇಖ್ ಯತ್ನಿಸಿದ್ದಾನೆ ಎನ್ನಲಾಗಿದೆ.