ಕೊಲ್ಹಾರ: ಸತಿಪತಿಯರಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಸಂಸಾರ ನೌಕೆ ಸರಾಗವಾಗಿ ಸಾಗುತ್ತದೆ ಎಂದು ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು. ಪಟ್ಟಣದ ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಹಾಗೂ ಸಹೋದರ ಲಕ್ಷಣ ಹಗೇದಾಳ ಸಹೋದರರ 25 ನೇಯ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಆಸಂಗಿ ರಸ್ತೆಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಗಳ ವೃತ್ತ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಸನಾತನ ಪರಂಪರೆಯಲ್ಲಿ ದಾಂಪತ್ಯಕ್ಕೆ, ಕೂಡೂಕುಟುಂಬಕ್ಕೆ ಅಪಾರ ಮಹತ್ವವಿದೆ. ದಾಂಪತ್ಯ ಜೀವನ ಸರಾಗವಾಗಿ ಸಾಗಲು ಸಂಸ್ಕಾರ, ಹೊಂದಾಣಿಕೆ […]