ಕೋಟಾ: ರಾಜಸ್ಥಾನದ ಕೋಟಾ ಜಿಲ್ಲಾಡಳಿತವು ಮುಂಬರುವ ಧಾರ್ಮಿಕ ಹಬ್ಬಗಳ ದೃಷ್ಟಿಯಿಂದ ʼದಿ ಕಾಶ್ಮೀರ ಫೈಲ್ಸ್ʼ ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಒಂದು ತಿಂಗಳ ಅವಧಿಯ ನಿಷೇಧಾಜ್ಞೆ ವಿಧಿಸಿದೆ. ಸೆಕ್ಷನ್ 144 ಮಂಗಳವಾರ ಜಾರಿಗೆ ಬಂದಿದ್ದು, ಏಪ್ರಿಲ್ 21 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರು ವಂತಿಲ್ಲ. ಶಾಂತಿ ಭಂಗ ತರುವಂತಹ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸ್ಥಳೀಯ […]