ಮುಂಬೈ: ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೇಸರ್‌ನಲ್ಲಿ ವಿವಾಹ ಸಮಾರಂಭ ನೆರವೇರಿತು. ಇಬ್ಬರೂ ತಮ್ಮ ಕುಟುಂಬ, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆ ಮಣೆ ಏರಿದರು. ಶನಿವಾರ ಪುಲ್ಕಿತ್-ಕೃತಿ ತಮ್ಮ ಅಧಿಕೃತ Instagram ಖಾತೆಯಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಕೃತಿ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರ ವಧುವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕುಂದನ್ ಆಭರಣಗಳನ್ನು ಧರಿಸಿದ್ದಾರೆ. ವರ ಪುಲ್ಕಿತ್ ಕೂಡ ಹಸಿರು ಬಣ್ಣದ ಶೇರ್ವಾನಿಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಫೋಟೋಗಳಲ್ಲಿ ದಂಪತಿಗಳು […]