ಕುನೋ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಮತ್ತೊಂದು ಕೆಟ್ಟ ಸುದ್ದಿ ಹೊರಬಿದ್ದಿದ್ದು, ಹೆಣ್ಣು ಚೀತಾದ ನವಜಾತ ಮರಿ ಜ್ವಾಲಾ ಅನಾರೋಗ್ಯದಿಂದ ಸಾವನ್ನಪ್ಪಿದೆ. ಮಾರ್ಚ್ 24ರಂದು ಕುನೊದಲ್ಲಿ ಹೆಣ್ಣು ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೇಲ್ವಿಚಾರಣೆಯ ವೇಳೆ, ಒಂದು ಮರಿ ಅನಾರೋಗ್ಯದಿಂದ ಬಳಲುತ್ತಿರುವುದು ಗೊತ್ತಾಗಿದ್ದು, ಅದು ಮಂಗಳವಾರ ಮೃತ ಪಟ್ಟಿದೆ. ಪಿಸಿಸಿ ವನ್ಯಜೀವಿ ಜಸ್ವೀರ್ ಸಿಂಗ್ ಮರಿಯ ಸಾವನ್ನು ದೃಢಪಡಿಸಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಎರಡು ತಿಂಗಳಲ್ಲಿ ಮೂರು ಚಿರತೆಗಳು ಸಾವನ್ನಪ್ಪಿದ್ದು, ಸಧ್ಯ ಒಂದು ಮರಿ […]