ಮಾಸ್ಕೋ : ಕಳೆದ 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರಯಾನ ಲೂನಾ 25 ನೌಕೆಯನ್ನು ರಷ್ಯಾ ಶುಕ್ರವಾರ ಉಡಾವಣೆ ಮಾಡಿದೆ. ರಷ್ಯಾದ ಫಾರ್ ಈಸ್ಟ್ನಲ್ಲಿರುವ ವೊಸ್ಟೋಚ್ನಿ ಉಡಾವಣಾ ಸೌಲಭ್ಯದಿಂದ ಲೂನಾ -25 ಉಡಾವಣೆಯಾಗಿದೆ. ಸೋಯುಜ್ -2 ಫ್ರೆಗಟ್ ರಾಕೆಟ್ನಲ್ಲಿ ಉಡಾವಣೆಗೊಂಡ ಲೂನಾ 25 ಶುಕ್ರವಾರ ಹಾರಾಟ ನಡೆಸಿತು. ಉಡಾವಣೆಯ ಸುಮಾರು 564 ಸೆಕೆಂಡುಗಳ ನಂತರ ಫ್ರೆಗಟ್ ಬೂಸ್ಟರ್ ರಾಕೆಟ್ನ ಮೂರನೇ ಹಂತದಿಂದ ಬೇರ್ಪಟ್ಟಿದೆ. ಉಡಾವಣೆಯಾದ ಒಂದು ಗಂಟೆಯ ನಂತರ ಲೂನಾ -25 ಬಾಹ್ಯಾಕಾಶ ನೌಕೆ ಬೂಸ್ಟರ್ನಿಂದ ಬೇರ್ಪಡುತ್ತದೆ. […]