2025ರ ಮಹಾಕುಂಭ ಮೇಳದಲ್ಲಿ (Mahakumbh Mela 2025) ಪಾಲ್ಗೊಳ್ಳುವವರಿಗೆ ಕುಂಭ ಪ್ರದೇಶಕ್ಕೆ ಪ್ರವೇಶ ಪಡೆಯುವ ಮೊದಲು ತಮ್ಮ ಗುರುತಿನ ಪುರಾವೆಯಾಗಿ ಆಧಾರ್ ಅಥವಾ ವೋಟರ್ ಐಡಿಯನ್ನು ತೋರಿಸಬೇಕಾಗುತ್ತದೆ. ಇದು ನಕಲಿ ಬಾಬಾಗಳ ಪ್ರವೇಶವನ್ನು ತಡೆಯಲು ರೂಪಿಸಲಾಗಿದೆ. ಇದರೊಂದಿಗೆ 13 ರೀತಿಯ ತಪಾಸಣೆ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಆಡಳಿತ ಮಂಡಳಿಯಾದ ಅಖಿಲ ಭಾರತೀಯ ಅಖಾರಾ ಪರಿಷತ್ (ABAP) ಕೈಗೊಳ್ಳಲಿದೆ.