ಬೆಂಗಳೂರು: ಕಾಡುಮಲ್ಲೇಶ್ವರ ಗೆಳಯರ ಬಳಗ ಹಾಗೂ ಮುಜರಾಯಿ ಇಲಾಖೆ ಸಹಕಾರದಲ್ಲಿ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಸಂದರ್ಭ ಪ್ರತಿವರ್ಷದಂತೆ ಡಿಸೆಂಬರ್ 2ರಿಂದ 4 ರ ವರೆಗೆ ಕಡಲೆಕಾಯಿ ಪರಿಷೆ ಮತ್ತು ಬಯಲು ರಂಗ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಅವರು, ಕಾಡುಮಲ್ಲೇಶ್ವರದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮೂರು ದಿನಗಳ ಕಾಲ ಜರುಗಲಿದೆ. ಈ ಸಂಧರ್ಭದಲ್ಲಿ 800Kaa ಕೆಜಿ ಕಡಲೆಕಾಯಿಗಳಿಂದ ಶೃಂಗರಿಸಿದ 20 ಅಡಿ ಎತ್ತರ, […]