ಲಂಡನ್: ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋ ದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್ ಹಾನ್‌ಕಾಕ್ ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದ ಮೂಲದ, ಕನ್ಸರ್ವೇಟೀವ್ ಪಕ್ಷದ ಸಂಸದ, ಬ್ರಿಟನ್ ನ ಮಾಜಿ ಚಾನ್ಸಿಲರ್ ಸಾಜಿದ್ ಜಾವಿದ್ ನೂತನ ಆರೋಗ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿದ್ದಾರೆ. ಟ್ವಿಟರ್ ನಲ್ಲಿ ವಿಡಿಯೋವನ್ನೂ ಪೋಸ್ಟ್ ಮಾಡಿರುವ ಹಾನ್ಕಾಕ್, ನಾನು ಆರೋಗ್ಯ ಹಾಗೂ ಸಾಮಾಜಿಕ ಕಾಳಜಿ ಕಾರ್ಯದರ್ಶಿಯ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ […]