ಚಿಕ್ಕಬಳ್ಳಾಪುರ : ಅರ್ಥಪೂರ್ಣವಾಗಿ ಬದುಕಿ ಸಾರ್ಥಕವಾದ ಬಾಳನ್ನು ಕಾಣುವ ಸತ್ ಸಂಪ್ರದಾಯ ಇರುವಂತಹ ಸ್ಥಳವನ್ನು ಸ್ವರ್ಗ ಎಂದು ಕರೆಯಲಾಗುತ್ತದೆ. ಸಮಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡರೆ ಆ ಕ್ಷೇತ್ರ ತಪೋಭೂಮಿಯಾಗುತ್ತದೆ.ಅಂತಹ ತಪೋಭೂಮಿಯಾದ ಸತ್ಯ ಸಾಯಿ ಗ್ರಾಮದಲ್ಲಿ ಸದ್ಗುರು ಮಧುಸೂಧನ್‌ಸಾಯಿ ಮಾರ್ಗದರ್ಶನದಲ್ಲಿ ದೇಶದ ಭವ್ಯ ಸಂಸ್ಕೃತಿ ಜಾಗೃತ ಗೊಂಡಿದೆ ಎಂದು ಮೇಘಾಲಯ ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಅಭಿಪ್ರಾಯಪಟ್ಟರು. ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ನಡೆಯುತ್ತಿರುವ ಶ್ರೀ ಸತ್ಯಸಾಯಿ ದಸರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ […]