ಋತುಚಕ್ರದ ವೇಳೆ ಹೆಣ್ಣುಮಕ್ಕಳು ಬಹಳ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಶಾಲಾ ಕಾಲೇಜಿಗೆ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ ಎಂಬುದನ್ನು ಅರಿತ ರಾಜ್ಯ ಸರಕಾರವು ಮುಟ್ಟಿನ ಕಪ್ ಯೋಜನೆಯ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ಆದರೆ ಈ ಮುಟ್ಟಿನ ಕಪ್ ಬಗ್ಗೆ ಅನೇಕರಿಗೆ ಸಂಶಯಗಳಿವೆ. ಮದುವೆಯಾಗದ ಹೆಣ್ಣುಮಕ್ಕಳು ಮುಟ್ಟಿನ ಕಪ್‌ಗಳನ್ನು ಬಳಸಬಹುದೇ? ಇದರಿಂದ ಯಾವುದೇ ಇನ್ನಿತರ ಸೋಂಕುಗಳು ತಗುಲುತ್ತವೆಯೇ ಎಂಬ ಸಂಶಯಗಳು ಇವೆ. ಮುಟ್ಟಿನ ಕಪ್ ಬಳಕೆಯಿಂದ ಅನಾನುಕೂಲಕ್ಕಿಂತ ಅನುಕೂಲಗಳೇ ಹೆಚ್ಚಿವೆ. ಮುಟ್ಟಿನ ಕಪ್ ಹೆಚ್ಚು ಕಾಲ ಉಳಿಯುತ್ತದೆ. ಆದಾಗ್ಯೂ, […]