ಬೊಗೊಟಾ (ಕೊಲಂಬಿಯಾ): ಕೊಲಂಬಿಯಾದ ಕುಕುನುಬಾ ಪುರಸಭೆಯ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ನಂತರ ಒಟ್ಟು ಹನ್ನೊಂದು ಮಂದಿ ಅವಶೇಷಗಳಡಿ ಸಿಲುಕಿದ್ದು, ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ವಾರದ ಆರಂಭದಲ್ಲಿ ಮೂವರು ಗಣಿಗಾರರ ಮೃತದೇಹಗಳನ್ನು ಮೇಲ್ಮೈಗೆ ತರಲಾಗಿದ್ದು, ಶುಕ್ರವಾರ ಮತ್ತೊಂದು ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಕೊಲಂಬಿಯಾದಲ್ಲಿ 10,000 ಕ್ಕೂ ಹೆಚ್ಚು ಗಣಿಗಳಿವೆ. ಅವುಗಳಲ್ಲಿ ಬಹಳಷ್ಟು ಅಕ್ರಮವಾಗಿದೆ.