ನವದೆಹಲಿ: ದೆಹಲಿಯ ಶಾಸಕರ ಮಾಸಿಕ ವೇತನ ಹೆಚ್ಚಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರ ಮಾಡಿದ್ದ ಶಿಫಾರಸ್ಸಿಗೆ ಮಂಗಳವಾರ ಅನುಮೋದನೆ ನೀಡಿದೆ. ಇನ್ನು ಮುಂದೆ ದೆಹಲಿಯ ಶಾಸಕರು ವೇತನ ಮತ್ತು ಭತ್ಯೆ ಸೇರಿ ತಿಂಗಳಿಗೆ ₹90 ಸಾವಿರ ಪಡೆಯುತ್ತಾರೆ. ಇದಕ್ಕೂ ಮುನ್ನ ಪ್ರತಿ ತಿಂಗಳು ₹53 ಸಾವಿರ ವೇತನ ಪಡೆಯುತ್ತಿದ್ದರು. ಇದರಲ್ಲಿ ₹12 ಸಾವಿರ ವೇತನವಾದರೆ, ಉಳಿದ ಹಣವನ್ನು ಇತರೆ ಭತ್ಯೆಗಳ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಪರಿಷ್ಕೃತ ವೇತನದಿಂದಾಗಿ ತಿಂಗಳಿಗೆ […]