ಬೆಂಗಳೂರು: ಭಾರತದಲ್ಲಿ ಸೋಮವಾರ ಎಂಪಾಕ್ಸ್ ಕ್ಲೇಡ್ 1 ತಳಿಯ (Mpox Virus) ಮೊದಲ ಪ್ರಕರಣ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳೆದ ತಿಂಗಳು ಎಂಪಾಕ್ಸ್ ಸಮಸ್ಯೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ಕಾರಣವಾದ ಇದೇ ವೇರಿಯೆಂಟ್ ಇದಾಗಿದೆ. ಕೇರಳದ ವ್ಯಕ್ತಿಯಲ್ಲಿ ಎಂಪಾಕ್ಸ್ ಕ್ಲೇಡ್ 1 ತಳಿ ಪತ್ತೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹಿಂದಿರುಗಿದ ಮಲಪ್ಪುರಂ ಜಿಲ್ಲೆಯ 38 ವರ್ಷದ ವ್ಯಕ್ತಿಯಲ್ಲಿ ಕ್ಲೇಡ್ 1 ಬಿ ಸ್ಟ್ರೈನ್ ಪತ್ತೆಯಾಗಿದೆ […]