ಬೆಳಗಾವಿ: ನಿರಂತರ 6ನೇ ಸುತ್ತುಗಳಲ್ಲಿ ಬಿಜೆಪಿಗೆ ಮುನ್ನಡೆ ಹೊಂದಿದ ಹಿನ್ನಲೆಯಲ್ಲಿ ಮತ ಕೇಂದ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೊರಗೆ ನಡೆದಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಈ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಂಬರೀಶ್ ಅವರು ಕಣಕ್ಕೆ ಇಳಿದಿದ್ದರು. ಕೌಂಟಿಂಗ್ ದಿನವಾದ್ದರಿಂದ ಬೆಳ್ಳಂ ಬೆಳಗ್ಗೆ ಬೆಳಗಾವಿಯ ಆರ್‌ಪಿಡಿ ಕಾಲೇಜು ಮತ ಎಣಿಕೆ ಕೇಂದ್ರಕ್ಕೆ ಟೆನ್ಷನ್ನಲ್ಲೇ ಬಂದಿದ್ದರು. ಆದರೆ ನಿರಂತರ 6ನೇ ಸುತ್ತುಗಳಲ್ಲಿ ಬಿಜೆಪಿಗೆ ಮುನ್ನಡೆ ಹೊಂದಿದ್ದು, ಸೋಲು ಖಚಿತವಾದ ಬೆನ್ನಲ್ಲೇ ನಿಧಾನವಾಗಿ ಕೇಂದ್ರದಿಂದ ಹೊರಬಂದಿದ್ದಾರೆ.