Thursday, 19th September 2024

ಮಸ್ಸೂರಿಯಲ್ಲಿ ತರಬೇತಿ ನಿರತ 33 ನಾಗರಿಕ ಸೇವಾ ಅಧಿಕಾರಿಗಳಿಗೆ ಸೋಂಕು ದೃಢ

ಡೆಹ್ರಾಡೂನ್: ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರು ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿನ ತರಬೇತಿ ನಿರತ 33 ನಾಗರಿಕ ಸೇವಾ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಅಕಾಡೆಮಿ, 428 ಅಧಿಕಾರಿಗಳು ಕ್ಯಾಂಪಸ್ ನಲ್ಲಿ ತರಬೇತಿ ಪಡೆಯುತ್ತಿದ್ದು, ಈ ಪೈಕಿ 33 ಅಧಿಕಾರಿಗಳಿಗೆ ಸೋಂಕು ದೃಢಪಟ್ಟಿದೆ. ಸರ್ಕಾರದ ಸೂಚನೆಯಂತೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದೆ. ಸೂಕ್ತ ರಕ್ಷಣೆಯೊಂದಿಗೆ ತರಬೇತಿ ನಿರತ ಅಧಿಕಾರಿಗಳಿಗೆ ಆಹಾರ ಮತ್ತಿತರ ಅವಶ್ಯತೆಗಳನ್ನು ಪೂರೈಸಲಾಗುತ್ತಿದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ. […]

ಮುಂದೆ ಓದಿ