ಸ್ವಂತ ಸೂರಿಲ್ಲದೆ ಹೀನಾಯ ಬದುಕು ವಿದ್ಯಾಭ್ಯಾಸ ಮೊಟಕು ಜಿಲ್ಲಾಡಳಿತದ ಆಸರೆಗಾಗಿ ಕಾದು ಸುಸ್ತು ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಹಂದಿಜೋಗಿ ಕುಟುಂಬಗಳು ನಾಲ್ಕು ತಲೆಮಾರುಗಳಿಂದಲೂ ಸ್ವಂತ ಸೂರಿಲ್ಲದೆ ಹೀನಾಯ ಬದುಕು ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. 80 ವರ್ಷಗಳಿಂದ ತಾತ ಮುತ್ತಾತರ ಕಾಲದಿಂದ ಗುಡಿಸಲಿನಲ್ಲಿ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಬಳಿ ಅಂಗಲಾಚಿ ವಾಸಿಸುವ ಮನೆ ಮತ್ತು ಮೂಲ ಸೌಕರ್ಯ ಕಲ್ಪಿಸಿಕೊಡಿ ಎಂದು ಕೇಳಿದ್ದರು. ಆದರೆ ಇದುವರೆಗೂ […]