ಇಸ್ಲಾಮಾಬಾದ್: ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದಚ್ಯುತ ಪ್ರಧಾನಿ ನವಾಜ್ ಷರೀಫ್(70) ಬಂಧನಕ್ಕೆ ಪಾಕಿಸ್ತಾನ ಸರ್ಕಾರ ವಾರಂಟ್ ಹೊರಡಿಸಿದೆ. ಸದ್ಯ ಲಂಡನ್ನಲ್ಲಿ ನೆಲೆಸಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಷರೀಫ್ ಮಾಡಿಕೊಂಡಿದ್ದ ಮನವಿ ಯನ್ನು ಲಾಹೋರ್ ಹೈಕೋರ್ಟ್ ಪುರಸ್ಕರಿಸಿತ್ತು. ನವಾಜ್, ಅವರ ಪುತ್ರಿ ಹಾಗೂ ಅಳಿಯ ಸಫ್ದಾರ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಡಿಸೆಂಬರ್ 2018ರಂದು ಷರೀಫ್ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿಯೂ ಅವರಿಗೆ ಜಾಮೀನು ಲಭಿಸಿತ್ತು. ‘ಕಾನೂನು ಪ್ರಕಾರವೇ […]