ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಹೊಸ ಸಂಸತ್ ಕಟ್ಟಡದಲ್ಲಿ ಆರಂಭವಾಗಿದೆ. ಮೇ.28ರಂದು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದ ಹೊಸ ಸಂಸತ್ ಭವನಕ್ಕೆ ಚಾಲನೆ ನೀಡಲಾಗುತ್ತಿದೆ. ಹೊಸ ಸಂಸತ್ತಿನಲ್ಲಿ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಸೋಮವಾರ ದಿಂದ ಸಂಸತ್ತಿನ ವಿಶೇಷ ಆರಂಭವಾಗಿದ್ದು, ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಹಳೇ ಸಂಸತ್ ಕಟ್ಟಡದಲ್ಲಿ ಚರ್ಚೆಗಳು ನಡೆದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವರು ಮಾತನಾಡಿದರು. ಮಂಗಳವಾರ ಮಧ್ಯಾಹ್ನ ನೂತನ […]