ಲೋಕೇಶ್ ಕಾಯರ್ಗ ಸುದ್ದಿ ಪತ್ರಿಕೆಯೊಂದರ ಹಿಂದೆ ನೂರೆಂಟು ಕೈಗಳ ಶ್ರಮವಿರುತ್ತದೆ. ಎಲ್ಲರ ಶ್ರಮವೂ ವಿಭಿನ್ನ. ವರದಿಗಾರರು ಸುದ್ದಿ ಸಂಗ್ರಹಿಸಿಕೊಡುವವರಾದರೆ, ಅದನ್ನು ಒಪ್ಪ,ಓರಣಗೊಳಿಸಿ,, ಕಾಗುಣಿತ ದೋಷಗಳನ್ನು ಸರಿಪಡಿಸಿ, ಆಕರ್ಷಕ ವಾದ ಶೀರ್ಷಿಕೆ ಕೊಡುವುದು ಡೆಸ್ಕ್ ಪತ್ರಕರ್ತರ ಕೆಲಸ. ಅಂದವಾದ ಪುಟ ವಿನ್ಯಾಸ ದೊಂದಿಗೆ ಜೀವ ತುಂಬುವುದು ಪುಟ ವಿನ್ಯಾಸಕಾರರ ಕೆಲಸ. ಕನ್ನಡಪ್ರಭ ಪತ್ರಿಕೆಯಲ್ಲಿ ವೃತ್ತಿಯ ಆರಂಭಿಕ ಮಜಲು ಆರಂಭಿಸಿದ್ದ ವಸಂತ ನಾಡಿಗೇರ್, ಸಂಪಾದಕ ವೈಎನ್ಕೆ ಅವರ ‘ಪನ್’ಗಳಿಂದ ಪ್ರಭಾವಿತ ರಾಗಿದ್ದವರು. ೨೦೦೦ನೇ ಇಸವಿಯಲ್ಲಿ ವಿಜಯ ಕರ್ನಾಟಕ ಪತ್ರಿಕೆಗೆ ಸೇರಿದ […]