ಲಕ್ನೋ: ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರ, ಸರ್ಕಾರೇತರ ಕಚೇರಿಗಳು ಮತ್ತು ಮುಖ್ಯವಾಗಿ ಮಾರುಕಟ್ಟೆಗಳು ಸ್ವಾತಂತ್ರ್ಯ ದಿನದಂದು ತೆರೆದಿರುತ್ತವೆ. ಅಂದರೆ, ಯುಪಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಜೆ ಇಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿ ಜಿಲ್ಲೆಯಲ್ಲೂ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಕಾರ್ಯಕ್ರಮವಾಗಿ ಆಚರಿಸಲಾಗುವುದು ಎಂದು ಹೇಳಿದ್ದಾರೆ. “ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯ ಬೇಕು. ಸ್ವಾತಂತ್ರ್ಯೋತ್ಸವ ಸಪ್ತಾಹದಲ್ಲಿ ವಾರದ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಗಳನ್ನು […]