ಚೆನ್ನೈ: ಓಮಿಕ್ರಾನ್ ವೈರಸ್ ದಾಳಿ ಇಡುತ್ತಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳು ನಾಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಆರೋಗ್ಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ಕಳುಹಿಸಿದ್ದು, ಓಮಿಕ್ರಾನ್ ವಿಷಯವಾಗಿ ಉನ್ನತ ಮಟ್ಟದ ನಿಗಾ ವಹಿಸುವುದು ತೀರಾ ಅವಶ್ಯಕ ಎಂದು ತಿಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ತಪಾಸಣಾ ಘಟಕಗಳನ್ನು ತೆರೆಯಲು ಆದೇಶಿಸ ಲಾಗಿದ್ದು, ವಿದೇಶಗಳಿಂದ ತಮಿಳುನಾಡಿಗೆ ಬಂದವರನ್ನು ಟ್ಯ್ರಾಕ್ ಮಾಡಿ, ಅವರ ಆರೋಗ್ಯ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ‘ಈಗಾಗಲೇ ಓಮಿಕ್ರಾನ್ ವಿಷಯವಾಗಿ ಕೇಂದ್ರ ಸರ್ಕಾರದಿಂದ […]