ನವದೆಹಲಿ: ಸ್ವದೇಶಿ ವಸ್ತುಗಳ ಮೇಲೆ ಅವಲಂಬನೆ ಹೆಚ್ಚಿಸಿ ವಿದೇಶಿ ವಸ್ತುಗಳಿಗೆ ಗುಡ್ಬೈ ಹೇಳಿ ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ‘ಆತ್ಮನಿರ್ಭರ್ ಭಾರತ್’ ಎಂಬ ಸ್ವಾವಲಂಬನೆ ಎಂದು ಅರ್ಥಕೊಡುವ ಈ ಶಬ್ದವೀಗ 2020ನೇ ಸಾಲಿನ ಹಿಂದಿ ಪದ ಎಂಬುದಾಗಿ ‘ಆಕ್ಸ್ಫರ್ಡ್ ಘೋಷಿಸಿದೆ.’ ಆತ್ಮನಿರ್ಭರತಾಕ್ಕೆ ಇಂಗ್ಲೀಷಿನಲ್ಲಿ Self-Reliant, Self-Sufficient ಎಂಬ ಅರ್ಥವಿದೆ. ಕನ್ನಡದಲ್ಲಿ ಹೇಳುವುದಾದರೆ ಸ್ವಾಭಿಮಾನ, ಸ್ವಾವಲಂಬನೆ. ‘ನನ್ನ ಆತ್ಮಕ್ಕೂ ಹೊರೆ ಎನಿಸದಂತೆ’ ಮತ್ತು ‘ನಮಗೇ ನಾವು ಹೊರೆ ಆಗದಂತೆ’ ಎಂಬ ಅರ್ಥವೂ ಇದೆ ಎಂದು ವ್ಯಾಖ್ಯಾನಿಸಲಾಗಿದೆ. […]