ನವದೆಹಲಿ: ದೇಶದ ಭದ್ರತೆ ಸವಾಲುಡ್ಡುವ ಘಟನೆಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಲಷ್ಕರ್-ಇ- ತೋಯ್ಬಾದ ಅಂಗ ಸಂಸ್ಥೆ ಜಮ್ಮು-ಕಾಶ್ಮೀರದ ಪಿಪಲ್ಸ್ ಆಂಟಿ ಪ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ಸಂಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಲಷ್ಕರ್-ಇ-ತೋಯ್ಬಾದ ಸದಸ್ಯ ಅರ್ಬಜ್ ಅಹಮದ್ ಮಿರ್‍ನನ್ನು ಪ್ರತ್ಯೇಕ ಭಯೋತ್ಪಾದಕ ಎಂದು ಇದೇ ವೇಳೆ ಘೋಷಿಸ ಲಾಗಿದೆ. ಪಿಎಎಫ್‍ಎಫ್ ಭದ್ರತಾ ಸಿಬ್ಬಂದಿಗಳಗೆ ಬೆದರಿಕೆ ಒಡ್ಡುವುದು, ರಾಜಕೀಯ ನಾಯಕರಿಗೆ ಮತ್ತು ನಾಗರೀಕ ಕೆಲಸಗಾರರಿಗೆ ಬೆದರಿಕೆ ಹಾಕುತ್ತಿದ್ದರು. ಜಮ್ಮು-ಕಾಶ್ಮೀರ ಮತ್ತು ದೇಶದ ಇತರ ನಗರಗಳಲ್ಲಿ ಪಿಎಎಫ್‍ಎಫ್ ಸಂಘಟನೆ ಹಿಂಸಾಕೃತ್ಯ […]