ಪ್ರಾಸ್ತಾವಿಕ ಧನಂಜಯ ತ್ರಿಪಾಠಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಐತಿಹಾಸಿಕವಾಗಿ ಬಹಳ ಹತ್ತಿರದ ಸ್ನೇಹಿತರು. 1947ರ ನಂತರ ಪಾಕಿಸ್ತಾನವು ರಾಷ್ಟ್ರ ನಿರ್ಮಾಣಕ್ಕಾಗಿ ತೈಲಸಮೃದ್ಧ ರಾಷ್ಟ್ರ ಸೌದಿ ಅರೇಬಿಯಾ ಬಳಿ ನೆರವು ಕೇಳಿಕೊಂಡು ಹೋಗಿತ್ತು. ನಂತರ ಪಾಕಿಸ್ತಾನಕ್ಕೆೆ ಯಾವಾಗ ಆರ್ಥಿಕ ಸಂಕಷ್ಟಗಳು ಎದುರಾದರೂ ಅದು ಸೌದಿ ಅರೇಬಿಯಾದಿಂದಲೇ ಉದಾರ ನೆರವು ಪಡೆದಿದೆ. ಇತ್ತೀಚಿನ ಉದಾಹರಣೆಯನ್ನೇ ನೋಡುವುದಾದರೆ, ಪಾಕಿಸ್ತಾನದ ಆರ್ಥಿಕತೆ ಕಳೆದ ಕೆಲ ವರ್ಷಗಳಿಂದ ಬಹಳ ಸಂಕಷ್ಟದಲ್ಲಿದೆ. ಹೀಗಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) […]