ನವದೆಹಲಿ: ಮೈಕ್ರೋ ಬ್ಲಾಗಿಂಗ್ ಕಂಪನಿ ಟ್ವಿಟರ್ ಅನ್ನು ಉದ್ಯಮಿ ಎಲಾನ್ ಮಸ್ಕ್ ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದು ಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿ ದ್ದಾರೆ. ಪರಾಗ್ ಅಗರ್ವಾಲ್ ಅವರನ್ನು ಹಾಗೆಯೇ ಕಳುಹಿಸಿಕೊಡುವಂತಿಲ್ಲ. ಪರಿಹಾರದ ಮೊತ್ತವನ್ನು ನಿಡಬೇಕಿದೆ ಎಂದು ವರದಿ ಯೊಂದರಲ್ಲಿ ಉಲ್ಲೇಖವಾಗಿದೆ. ಇದರ ಪ್ರಕಾರ ಅಂದಾಜು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್ವಾಲ್ ಪಡೆಯಲಿದ್ದಾರೆ. ಇದರಲ್ಲಿ ಮೂಲ ವೇತನ, ಈಕ್ವಿಟಿ ಅವಾರ್ಡ್ಗಳು ಸೇರಿರಲಿವೆ ಎಂದು ವರದಿ ಮಾಡಿದೆ. ಟ್ವಿಟರ್ನ ಮುಖ್ಯ […]