ರುದ್ರಾಪುರ: ಪತಂಜಲಿಯ ಆಹಾರ ಉತ್ಪನ್ನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ್ ಲಿಮಿಟೆಡ್‌ನ ಸಹಾಯಕ ಮ್ಯಾನೇಜರ್ ಸೇರಿದಂತೆ ಮೂವರಿಗೆ ಪಿಥೋರಘರ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಪಿಥೋರಗಢ್‌ನ ಬೆರಿನಾಗ್‌ನಲ್ಲಿರುವ ಮುಖ್ಯ ಮಾರುಕಟ್ಟೆಯಲ್ಲಿರುವ ಲೀಲಾ ಧಾರ್ ಪಾಠಕ್ ಅವರ ಅಂಗಡಿಯಲ್ಲಿ ಆಹಾರ ಸುರಕ್ಷತಾ ನಿರೀಕ್ಷಕರು ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನವರತ್ನ ಇಲೈಚಿ ಸೋನ್ ಪಾಪ್ಡಿ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲ ವಾದ ನಂತರ […]