ಪ್ರವಾಹ ಬಂದು, ಮರಳಿನ ರಾಶಿಯಲ್ಲಿ ಹುದುಗಿಹೋಗಿದ್ದ ಆ ದೇಗುಲವು ಪುನಃ ಜನರಿಗೆ ದರ್ಶನ ನೀಡಲು ಕರೋನಾ ಲಾಕ್‌ಡೌನ್ ಕಾರಣ ಎನಿಸಿತು! ಶಶಾಂಕ್ ಮುದೂರಿ ಆ ಪುಟ್ಟ ಹಳ್ಳಿಯಲ್ಲಿ ಈ ವರ್ಷದ ಎಪ್ರಿಲ್‌ನಲ್ಲಿ ಒಮ್ಮೆಗೇ ಜನಸಂಖ್ಯೆ ಜಾಸ್ತಿಯಾಯಿತು. ಕಾರಣ? ಕರೋನಾ ವಿಧಿಸಿದ ಲಾಕ್‌ಡೌನ್. ನಗರಗಳಲ್ಲಿ, ವಿದೇಶಗಳಲ್ಲಿ ಇದ್ದ ಯುವಕರು ಹಳ್ಳಿಗೆ ಹಿಂದಿರುಗಿದರು. ಲಾಕ್ಡೌನ್ ಅವಧಿಯಲ್ಲಿ ಅವರೆಲ್ಲ ಸೇರಿ ಮಾಡಿದ ಕೆಲಸವೇನು ಗೊತ್ತೆ? ಒಂದು ದೇವಾಲಯವನ್ನು ಭೂಮಿಯಿಂದ ಅಗೆದು ತೆಗೆದದ್ದು! ಪೆರುಮಲ್ಲಪಾಡು ಗ್ರಾಮವು ಆಂಧ್ರಪ್ರದೇಶದ ಸಣ್ಣ ಗ್ರಾಮ. ಜೇಚರ‌್ಲ ಮಂಡದಲ್ಲಿರುವ ಈ ಗ್ರಾಮದ […]