ನವದೆಹಲಿ: ಮಹಿಳೆಯರಿಗಾಗಿ ಪ್ರತ್ಯೇಕ ಬಸ್‌ಗಳು, ರೈಲು ಬೋಗಿಗಳು, ದೇವಸ್ಥಾನಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳೂ ಇವೆ. ಇದರೊಂದಿಗೆ 250 ‘ಪಿಂಕ್ ಪಾರ್ಕ್’ಗಳು ತೆರೆದು ಕೊಳ್ಳಲಿವೆ. ಮಹಿಳೆಯರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಉದ್ದೇಶದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಗರ ದಾದ್ಯಂತ ಮಹಿಳೆಯರಿಗೆ ಮಾತ್ರ ಉದ್ಯಾನವನಗಳನ್ನು ರಚಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾರ್ಕ್‌ಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಹಿಳೆಯರಿಗಾಗಿಯೇ ಹೆಚ್ಚಿನ ಉದ್ಯಾನವನಗಳನ್ನು ಸಿದ್ದಗೊಳಿಸಲು ದೆಹಲಿ ಸಜ್ಜಾಗಿದೆ. ಮಹಿಳೆಯರಿಗೆ ಹೆಚ್ಚು ಆರಾಮ ದಾಯಕ ಸ್ಥಳಗಳನ್ನು ಒದಗಿಸುವುದು […]