ಅವಲೋಕನ ಕುಮಾರ್ ಶೇಣಿ ಬ್ರಿಟನ್ನಿನ ಸಂಸತ್ತಿನಲ್ಲಿ ಕೇವಲ ಚರ್ಚೆ ಮಾತ್ರ ನಡೆಯುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಶ್ರೀಮಂತರ ಸಭೆಯಲ್ಲಿ ನಿರ್ಬಂಧವಿಲ್ಲದೇ ಮಾತನಾಡಬಹುದು ಎಂಬ ಕಾರಣಕ್ಕೋ ಏನೋ, ಬ್ರಿಟನ್ನಿನ ಸಂಸತ್ತನ್ನು ‘ಮಾತಿನ ಮನೆ’ ಎಂದು ಕರೆಯು ತ್ತಾರೆ. ಅಲ್ಲಿ ಮಾತನಾಡುವುದು ಬಿಟ್ಟರೆ, ಬೇರೆ ಹೊಸತೇನೂ ಹುಟ್ಟಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಗಾಂಧಿ ಬ್ರಿಟಿಷ್ ಸಂಸತ್ತನ್ನು ‘ಬಂಜೆ’ ಎಂದು ತನ್ನ ಹಿಂದ್ ಸ್ವರಾಜ್ ಪುಸ್ತಕದಲ್ಲಿ ಬರೆಯುತ್ತಾರೆ (ಮುಂದೆ ಆ ಪದವನ್ನು ಅವರೇ ತೆಗೆದುಹಾಕುತ್ತಾರೆ ಕೂಡ.) ರಾಜಕಾರಣದಲ್ಲಿ ಮಾತುಗಾರಿಕೆ ಬಹಳ ಮಹತ್ವದ್ದು […]