ಲಂಡನ್: ಪ್ರತಿಭಟನೆ ಹತ್ತಿಕ್ಕಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿರುವ ಮಸೂದೆಯನ್ನು ವಿರೋಧಿಸಿ ಲಂಡನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 10 ಮಂದಿ ಪೊಲೀಸರಿಗೆ ಗಾಯಗಳಾಗಿವೆ. 26 ಪ್ರತಿಭಟನಾಕಾರರನ್ನು ಬಂಧಿಸ ಲಾಗಿದೆ. ಕಿಲ್ ದ ಬಿಲ್ ಹೆಸರಿನಲ್ಲಿ ಲಂಡನ್ನ ಕೇಂದ್ರ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ಬಂಧಿತ 26 ಮಂದಿ ವಿರುದ್ಧ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿವೆ. ಮಹಿಳೆಯಿಂದ ಚಾಕುವಂತಹ ಮಾರಣಾಂತಿಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರತಿಭಟ ನಾ ನಿಯಂತ್ರಣದ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕಮಾಂಡರ್ ಅಡೆ ತಿಳಿಸಿದ್ದಾರೆ. ಕೇಂದ್ರ […]