ನವದೆಹಲಿ: ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ಮೋದಿ ಅವರು ವಿಶ್ರಾಂತಿಗಾಗಿ ಆಧ್ಯಾತ್ಮಿಕದತ್ತ ಮುಖ ಮಾಡಲಿದ್ದಾರೆ. ಮೇ 30 ರಿಂದ ಜೂನ್ 1ನೇ ತಾರೀಖಿನವರೆಗೆ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಇರಲಿದ್ದಾರೆ. ಪ್ರಸಿದ್ಧ ವಿವೇಕಾನಂದ ಸ್ಮಾರಕದಲ್ಲಿ ಹಗಲು-ರಾತ್ರಿ ಧ್ಯಾನದಲ್ಲಿ ತೊಡಗಲಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ಶುರುವಾದಾಗಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಧಾನಿ ಮೋದಿ ದೇಶದುದ್ದಕ್ಕೂ ಪ್ರಚಾರ ರ್ಯಾಲಿ ಗಳನ್ನು ನಡೆಸಿದರು. ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಚುನಾವಣೆಗೆ ಎರಡು ದಿನಗಳ ಮೊದಲು ಚುನಾವಣಾ ಪ್ರಚಾರವು ಕೊನೆಗೊಳ್ಳುತ್ತದೆ. […]