ಮೈಸೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರ ತಾಯಿ ಟಿ.ಪುಷ್ಪಲತಾ(73) ನಿಧನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದಲ್ಲಿ ಗುರುವಾರ ಅಂತ್ಯ ಕ್ರಿಯೆ ನೆರವೇರಲಿದೆ. ಮೈಸೂರಿನ ಕುರುಬಾರಹಳ್ಳಿ ವೃತ್ತದ ಸಮೀಪ ‘ಚಿಕ್ಕಿಯ ಮೂಗುತಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅದರಲ್ಲಿ ಭಾಗ ವಹಿಸಿದ್ದ ತಾರಾ ಅವರೊಂದಿಗೆ ಪುಷ್ಪಾಲತಾ ಅವರೂ ಇದ್ದರು. ಈ ವೇಳೆ ಪುಷ್ಪಲತಾ ಅವರಿಗೆ ತೀವ್ರವಾಗಿ ವಾಂತಿ ಯಾಗಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಬುಧವಾರ ರಾತ್ರಿ ಮೃತದೇಹವನ್ನು […]