ನವದೆಹಲಿ: ಗಾಜಿಯಾಬಾದ್ ನ ರಾಡಿಸನ್ ಬ್ಲೂ ಹೋಟೆಲ್ ನ ಮಾಲೀಕ ಅಮಿತ್ ಜೈನ್ ದೆಹಲಿಯ ಕಾಮನ್ ವೆಲ್ತ್ ವಿಲೇಜ್ ಪ್ರದೇಶದಲ್ಲಿನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯ ಮಾಂಡವಲಿ ಪೊಲೀಸ್ ಠಾಣೆಯ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಕಾಮನ್ವೆಲ್ತ್ ಗೇಮ್ಸ್ ಗ್ರಾಮ ದಲ್ಲಿರುವ ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಕರೆ ಮಾಡಿದವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. […]