ವಾಷಿಂಗ್ಟನ್: ಅಮೆರಿಕ ಮತ್ತು ಜಗತ್ತಿಗೇ ಬೆದರಿಕೆ ಒಡ್ಡುತ್ತಿರುವ ಚೀನಾದ ವಿವಿಧ ನಡವಳಿಕೆಗಳ ಕುರಿತಾದ ಅಂಶಗಳನ್ನು ಪರಿಶೀಲಿಸಲು ಹೊಸದಾಗಿ ರಚಿಸಲಾಗಿರುವ ಅಮೆರಿಕದ ಸಂಸತ್ತಿನ ಸದನ ಸಮಿತಿಯ ಸದಸ್ಯರಾಗಿ ಭಾರತ ಮೂಲದ ಅಮೆರಿಕದ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಅಮೆರಿಕದ ಪ್ರಜಾಪ್ರತಿನಿಧಿ ಸಭೆಯ ನಾಯಕ ಹಕೀಮ್ ಜೆಫ್ರೀಸ್ ಅವರು ಅಮೆರಿಕ ಮತ್ತು ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ನಡುವಿನ ಕಾರ್ಯತಂತ್ರದ ಸ್ಪರ್ಧೆಯ ಕುರಿತು ಪರಿಶೀಲನೆಗೆ ರಚಿಸಲಾದ ಸಮಿತಿಯ ಸದಸ್ಯರಾಗಿ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಿರುವುದಾಗಿ ಬುಧವಾರ ಪ್ರಕಟಿಸಿದರು. […]