ಚಾಮರಾಜನಗರ: ಆರ್.ಧೃವನಾರಾಯಣ್ ಅವರು ಮಾದರಿ ಜನನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಸ್ಮರಿಸಿದರು. ದಿವಂಗತ ಆರ್.ಧೃವನಾರಾಯಣ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಗ್ಗವಾಡಿಗೆ ತೆರಳಿ ದ್ರುವನಾರಾಯಣ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಅವರ ಭಾಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿ ನಿರಂತರ ಪ್ರಯತ್ನ ಮಾಡಿದ್ದ ದ್ರುವನಾರಾಯಣ್ ಅವರು ಜನರ ಮಧ್ಯ ಓಡಾಡದ ದಿನವೇ […]