ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವುದಾಗಿ ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಕಚೇರಿಗೆ ಇ-ಮೇಲ್ ಸಂದೇಶ ಬಂದಿದೆ. ಎನ್ಐಎಗೆ ಇ ಮೇಲ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಗಳು ಇ ಮೇಲ್ ಸಂದೇಶ ಕಳುಹಿಸಿದವರ ಮೂಲ ಪರಿಶೀಲಿಸುತ್ತಿದೆ. ಸಂದೇಶದಲ್ಲಿ ಮೋದಿ ಹತ್ಯೆಗಾಗಿ 20 ಸ್ಲೀಪರ್ ಸೆಲ್ ಗಳನ್ನು ಆಕ್ಟಿವೇಟ್ ಮಾಡಲಾಗಿದೆ. 20 ಕೆ.ಜಿ. RDX ಬಳಸಿ ಸ್ಫೋಟ ನಡೆಸುವ ಬೆದರಿಕೆ ಒಡ್ಡಲಾಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಧಾನಿ ಮೋದಿಯನ್ನು […]