ಮುಂಬೈ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್‌ನ ಅಂಗಸಂಸ್ಥೆ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ 922 ಕೋಟಿ ರೂ. ಜಿಎಸ್‌ಟಿ ನೋಟಿಸ್ ಬಂದಿರುವುದಾಗಿ ವರದಿಯಾಗಿದೆ. ಮರು ವಿಮೆ ಮತ್ತು ಸಹ ವಿಮೆಯಂತಹ ಸೇವೆಗಳಿಂದ ಸಂಸ್ಥೆಯು ಪಡೆಯುವ ಆದಾಯದ ಮೇಲೆ ಕ್ರಮವಾಗಿ 478.84 ಕೋಟಿ ರೂಪಾಯಿ, 359.70 ಕೋಟಿ ರೂಪಾಯಿ, 78.66 ಕೋಟಿ ರೂಪಾಯಿ ಮತ್ತು 5.38 ಕೋಟಿ ರೂ. ಜಿಎಸ್‌ಟಿ ಕೋರಿ ಡಿಜಿಜಿಐ ಕಂಪನಿಗೆ ನಾಲ್ಕು ನೋಟಿಸ್‌ಗಳನ್ನು ಕಳುಹಿಸಿದೆ. ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ವರದಿಯಲ್ಲಿ […]