ಕೋಲ್ಕತ್ತ: ಬಾಂಗ್ಲಾದೇಶ ಮತ್ತು ಪಶ್ಷಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಭಾನುವಾರ ಭಾರಿ ಚಂಡಮಾರುತ ಅಪ್ಪಳಿಸಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಚಂಡಮಾರುತವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತಕ್ಕೆ ‘ರೀಮಲ್’ ಎಂದು ಹೆಸರಿಡಲಾಗಿದೆ. ರೀಮಲ್ ಚಂಡಮಾರುತದ ಸಂಭವನೀಯ ಪರಿಣಾಮದ ದೃಷ್ಟಿಯಿಂದ ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎನ್‌ಎಸ್‌ಸಿಬಿಐ) ಭಾನುವಾರ ಮಧ್ಯಾಹ್ನದಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 26ರಂದು ಮಧ್ಯಾಹ್ನ […]