ಅಮ್ಮಾನ್: 17ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರೋನಕ್ ದಹಿಯಾ ಕಂಚಿನ ಪದಕ ಗೆದ್ದಿದ್ದಾರೆ. ಕಂಚಿನ ಪದಕದ ಪ್ಲೇ-ಆಫ್‌ನಲ್ಲಿ, ವಿಶ್ವದ ಎರಡನೇ ಶ್ರೇಯಾಂಕಿತ ರೋನಕ್,ಟರ್ಕಿಯ ಎಮ್ರುಲ್ಲಾ ಕ್ಯಾಪ್ಕನ್ ವಿರುದ್ದ 6-1ರ ಅಂತರದಿಂದ ಲೀಲಾಜಾಲವಗಿ ಮಣಿಸಿದ್ದಾರೆ.ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಇದಕ್ಕೂ ಮೊದಲು, ರೋನಕ್ ಸೆಮಿಫೈನಲ್‌ನಲ್ಲಿ ಹಂಗೇರಿಯ ಝೋಲ್ಟಾನ್ ಝಾಕೊ ವಿರುದ್ಧ ಸೋತಿದ್ದರು. ಈ ವಿಭಾಗದಲ್ಲಿ ಉಕ್ರೇನ್‌ನ ಇವಾನ್ ಯಾಂಕೋವ್‌ಸ್ಕಿ ಅವರು ಚಿನ್ನವನ್ನು ಗೆದ್ದರು, ಅವರು ತಾಂತ್ರಿಕ ಶ್ರೇಷ್ಠತೆಯ ಬಲದಿಂದ 13-4 ರಿಂದ ಸಿಜಾಕೊ ಅವರನ್ನು ಸೋಲಿಸಿದರು. […]