ಹರಿದ್ವಾರ: ಅಖಂಡ್ ಪರಮ್ಧಾಮ್ ಆಶ್ರಮದಲ್ಲಿ ಮೂವರು ರಷ್ಯಾ ಪ್ರಜೆಗಳು ಭಾರತೀಯ ಪದ್ಧತಿಯಂತೆ ಹಸೆಮಣೆ ಏರಿದರು. ರಷ್ಯಾದ 50 ಮಂದಿ ಆಧ್ಯಾತ್ಮಿಕ ಪ್ರಯಾಣದ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ಸಂಸ್ಕೃತಿ ರಷ್ಯಾ ಪ್ರವಾಸಿಗರನ್ನು ಸೆಳೆದಿದೆ. ರಷ್ಯಾದ 50 ಜನರ ಪೈಕಿ ಮೂರು ಜೋಡಿ ಭಾರತದಲ್ಲೇ ಮದುವೆಯಾಗಲು ನಿರ್ಧರಿಸಿತು. ಮೂರು ಜೋಡಿಗಳು ಆಶ್ರಮದಲ್ಲಿ ತಂಗಿದ್ದು, ಭಾರತೀಯ ಪದ್ಧತಿಯಂತೆ ವಿಧಿವಿಧಾನಗಳೊಂದಿಗೆ ವಿವಾಹವಾದರು. ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂವರು ರಷ್ಯಾ ಜೋಡಿಗಳುಈ ಮದುವೆ ಸಮಾರಂಭದಲ್ಲಿ ರಷ್ಯಾ ನಾಗರಿಕರು ಭಾರತೀಯ ರೊಂದಿಗೆ ಸೇರಿ ಕುಣಿದು […]