ಹೊಸದಿಲ್ಲಿ: 2024ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (Sahitya Akademi Award 2024)ಗೆ ಕನ್ನಡದ ವಿದ್ವಾಂಸ, ಭಾಷಾ ವಿಜ್ಞಾನಿ ಮತ್ತು ವಿಮರ್ಶಕ ಮೈಸೂರಿನ ಪ್ರೊ.ಕೆ.ವಿ.ನಾರಾಯಣ (K.V.Narayana) ಆಯ್ಕೆಯಾಗಿದ್ದಾರೆ. ಬುಧವಾರ (ಡಿ. 18) ಸಾಹಿತ್ಯ ಅಕಾಡೆಮಿ ಈ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರೊ.ಕೆ.ವಿ.ನಾರಾಯಣ ಅವರ ʼನುಡಿಗಳ ಅಳಿವುʼ ವಿಮರ್ಶೆ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ದೇಶದ 21 ಭಾಷೆಗಳ ಲೇಖಕರಿಗೆ ಪ್ರಶಸ್ತಿ ಲಭಿಸಿದೆ. ವಿಮರ್ಶೆ ವಿಭಾಗದಲ್ಲಿ 3 ಭಾಷೆಗಳ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, […]