ಪರೀಕ್ಷೆ ಎಂಬುದು ವಿದ್ಯಾರ್ಥಿಗಳು ಕಂಠಪಾಠ ಮಾಡುವ, ಕಷ್ಟಪಟ್ಟು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಇರಬಾರದು. ಅದೇನಿದ್ದರೂ ಅವರ ನೈಜಸಾಮರ್ಥ್ಯ, ತಿಳಿವಳಿಕೆಯ ಮಟ್ಟ ಮತ್ತು ಸಾಧನೆಯ ಗಟ್ಟಿತನವನ್ನು ಒರೆಹಚ್ಚಿ ಪರಿಶೀಲಿಸುವಂತೆ ಇರಬೇಕು ಎಂಬ ಪ್ರತಿಪಾದನೆ ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಆ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ವರ್ಷಕ್ಕೆ ೨ ಬಾರಿ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು ಸ್ವಾಗತಾರ್ಹ. ವಿದ್ಯಾರ್ಥಿಗಳು ಎಷ್ಟು ತಿಂಗಳು ತರಬೇತಿ ಪಡೆದಿದ್ದಾರೆ, ಕಲಿತಿದ್ದರಲ್ಲಿ ಎಷ್ಟನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದರ ಬದಲಾಗಿ, ಅವರು ವಿಷಯಗಳನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಹಾಗೂ ತಮ್ಮ […]
ಛಲ ಬಿಡದ ತ್ರಿವಿಕ್ರಮನಂತೆ. ಕೊನೆಗೂ ಇಸ್ರೋ ವಿಜ್ಞಾನಿಗಳು ಅಂದು ಕೊಂಡಂತೆಯೇ ಚಂದ್ರನ ಮೇಲೆ ಲ್ಯಾಂಡರ್ ‘ವಿಕ್ರಮ’ನನ್ನು ಇಳಿಸಿ ಆಚಂದ್ರಾರ್ಕ ಸಾಧನೆ. ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನಂಗಳದಲ್ಲಿ ಇಳಿದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ...