ನವದೆಹಲಿ: ಬಿಜೆಪಿ ಸದಸ್ಯ ಸಿ.ಪಿ. ಜೋಶಿ ರದ್ದುಪಡಿಸಿರುವ ಸತಿ ಪದ್ಧತಿಯನ್ನು ವೈಭವೀ ಕರಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ್ದು, ಲೋಕಸಭೆ ಯನ್ನು ಕೆಲಕಾಲ ಮುಂದೂಡಲಾಯಿತು. ರಾಜಸ್ಥಾನದ ಚಿತ್ತೋರ್ಗಢದ ಬಿಜೆಪಿ ಸದಸ್ಯ ಜೋಶಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಪ್ರಾರಂಭಿಸಿದಾಗ, ಆಕ್ರಮಣಕಾರ ಅಲ್ಲಾವುದೀನ್ ಖಿಲ್ಜಿಯಿಂದ ತನ್ನ ಗೌರವ ರಕ್ಷಿಸಲು ಮೇವಾರದ ರಾಣಿ ಪದ್ಮಾವತಿ ಸ್ವಯಂ ದಹನ ಮಾಡಿಕೊಂಡ ವಿಚಾರವನ್ನು ಉಲ್ಲೇಖಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯ ರಾದ ಸುಪ್ರಿಯಾ ಸುಳೆ (ಎನ್ಸಿಪಿ), […]